Friday, September 05, 2008

ಮಳೆಯೇ ಮಳೆಯೇ...

ಮಳೆಯೇ ಮಳೆಯೇ ಒಂದೇ ಸಮನೆ ಬರಲಿ ನಿನ್ನ ಮೆರವಣಿಗೆ
ಎಲೆಯ ಎಲೆಯ ಮೇಲೆ, ಹನಿಯ ಹನಿಯ ಚಂದ ಬರೆವಣಿಗೆ
ಎಲ್ಲರ ಮನದ ಮಾಡಿನ ಮೇಲೆ, ಮೆಲ್ಲಗೆ ಚಲಿಸಿ ಮೋಡದ ಮಾಲೆ
ಲೋಕವೇ ಸುಂದರ ಮಧುಶಾಲೆ ಇನ್ನುಮೇಲೆ
ಮಳೆಯೇ ಮಳೆಯೇ ಒಂದೇ ಸಮನೆ ಬರಲಿ ನಿನ್ನ ಮೆರವಣಿಗೆ
ಎಲೆಯ ಎಲೆಯ ಮೇಲೆ, ಹನಿಯ ಹನಿಯ ಚಂದ ಬರೆವಣಿಗೆ ೨

ಹೊಲೆಯ ಮುಂದೆ ಕೂತು ಬೆಚ್ಚಗೆ ಮುರಿವ ಹಪ್ಪಳವೆರಡು ಈ ಮಳೆ
ಕಾಡು ನಾಡು ಸೇರಿ ಸ್ನಾನಕ್ಕೆ ನಿಂತ ಸಪ್ಪಳ ಮಾಡೋ ಈ ಮಳೆ
ಅಂಜಿಕೆ ಮರಿಸುತ ಅಮ್ಮನ ಹರೆಯೇ ಜೋಗುಳ ಹಾಡೋ ಈ ಮಳೆ
ಗಿಡ ಮರವೆಲ್ಲ ಡೊಂಗೆಯ ಚಾಚಿ ಬೆಚ್ಚಲೇ ಹೆಚ್ಚಲು ಕೊಡೆಸಾಲು ಇನ್ನು ಮೇಲೆ
ಮಳೆಯೇ ಮಳೆಯೇ ಒಂದೇ ಸಮನೆ ಬರಲಿ ನಿನ್ನ ಮೆರವಣಿಗೆ
ಎಲೆಯ ಎಲೆಯ ಮೇಲೆ, ಹನಿಯ ಹನಿಯ ಚಂದ ಬರೆವಣಿಗೆ

ಬಳಪದಲ್ಲಿ ಬರೆದ ಮಗ್ಗಿಯ ಸಾಲನು ಹಳಿಸುವ ಕೋಡಿ ಈ ಮಳೆ
ಹನಿಯ ನಾರದಿಂದ ಭೂಮಿಯ ಸೀರೆಯ ಹೊಲಿವ ಮೋಡಿ ಈ ಮಳೆ
ಎಲ್ಲೆಂದರಲ್ಲಿ ಚಿಮ್ಮಿ ಕುಣಿದು ಓಡುವ ಹಸಿರಿನ ಹಾದಿ ಈ ಮಳೆ
ಕಾಗದಿಂದ ಮೂಡಿವೆ ದೋಣಿ... ಹರಳಲಿ ಹೃದಯದ ಋತುಮಾನ ಇನ್ನು ಮೇಲೆ

ಮಳೆಯೇ ಮಳೆಯೇ ಒಂದೇ ಸಮನೆ ಬರಲಿ ನಿನ್ನ ಮೆರವಣಿಗೆ
ಎಲೆಯ ಎಲೆಯ ಮೇಲೆ, ಹನಿಯ ಹನಿಯ ಚಂದ ಬರೆವಣಿಗೆ
ಎಲ್ಲರ ಮನದ ಮಾಡಿನ ಮೇಲೆ, ಮೆಲ್ಲಗೆ ಚಲಿಸಿ ಮೋಡದ ಮಾಲೆ
ಲೋಕವೇ ಸುಂದರ ಮಧುಶಾಲೆ ಇನ್ನುಮೇಲೆ
ಮಳೆಯೇ ಮಳೆಯೇ ಒಂದೇ ಸಮನೆ ಬರಲಿ ನಿನ್ನ ಮೆರವಣಿಗೆ
ಎಲೆಯ ಎಲೆಯ ಮೇಲೆ, ಹನಿಯ ಹನಿಯ ಚಂದ ಬರೆವಣಿಗೆ

ಹಾಡಿದವರು: ಚಿನ್ಮಯಿ ಶ್ರೀಪಾದ
ಚಲನ ಚಿತ್ರ: ಆತ್ಮೀಯ
ಸಂಗೀತ ನಿರ್ದೇಶಕರು: ಮನೋಜ್ ಜಾರ್ಜ
ಗೀತೆಕಾರರು: ಜಯಂತ ಕೈಕಿಣಿ

Labels: , , ,

1 Comments:

Blogger Prasanna Kumar said...

I saw in one of posts you stating that “today I realized I am immortal” what is this all about, can you tell me if you don’t mind……

12:29 am  

Post a Comment

Subscribe to Post Comments [Atom]

<< Home

Clicky Web Analytics